ಮುಂಜಾವು ನೇಸರನ ಸ್ವಾಗತಿಸಲು ಅಂಗಳದಲ್ಲಿ ರಂಗವಲ್ಲಿ ರಂಗಿಲ್ಲ. ದೀಪ ಬೆಳಗುವ ಹೊತ್ತಲ್ಲಿ ಮನೆಯೊಳಗೆ ಮನೆಯೊಡತಿ ಇಲ್ಲ. ದೀಪ ಹಚ್ಚುವ ಸಮಯ ಎಲ್ಲಿಗೆ ಹೊರಟೆ ನೀನು? ಕೇಳಲೂ ಅಮ್ಮನಿಗೂ ಮನಸಿಲ್ಲ. ದಾರಿಯ ತರಕಾರಿ ಕಾಳಯ್ಯನ ಜೊತೆ ಎರಡು ಟೊಮ್ಯಾಟೊ ಹೆಚ್ಚಿಗೆ ಕೇಳಲು ಅವಳಿಲ್ಲ. ಮನೆಯಲ್ಲಿ ಸಿಲಿಂಡರ್ ಮುಗಿದಿದೆ ಪಕ್ಕದ ಮನೆಗೆ ಹೋಗಿ ಸ್ವಲ್ಪ ಸೀಮೆಎಣ್ಣೆ ಕೇಳುವ ನೆರೆಹೊರೆಯ ಒಡನಾಟದಲ್ಲೂ ಅವಳ ಸದ್ದಿಲ್ಲ. ನಾಳೆ ಸ್ನಾನಕೆ ಶೀಗೆ ಚುಚ್ಚಲು ಪುಡಿ ಸಿದ್ದಗೊಳಿಸುವ ಘಾಟು ಯಾಕೋ ಘಮಿಸುತ್ತಿಲ್ಲ. ಕಾಯಿಮೊಟ್ಟೆ ಬಂತು ಹಾಕಿಸಿಕ್ಕೊಳ್ಳುತ್ತಿರಮ್ಮಾ? ಹೊರಗವನೂ ಕೂಗುತ್ತಿದ್ದಾನೆ. ಇವಳು ಅವನಿಗೆ ಕಾಯಲೂ ಹೇಳಿಲ್ಲ. ಸಪ್ತಪದಿಯ ಹೊಸ್ತಿಲಲ್ಲಿ ನಿಂತ ಎದುರು ಮನೆಯ ನೀರೆಯ ಮೊಗ್ಗಿನ ಜಡೆ ಬೇಕು ನಾನು ಫೋಟೋ ತೆಗೆಸಿಕ್ಕೊಳ್ಳಬೇಕು ಎನ್ನುತ್ತಿದ್ದವಳು ಮೊಗ್ಗು ಮುದುಡುವ ಸಮಯವಾದರೂ ಬರುವ ಸೂಚನೆ ಕಾಣುತ್ತಿಲ್ಲ. ಗಂಟೆ ನಾಲ್ಕಾಯಿತು ಶಾಲೆಯಿಂದ ಅವನ ಪುಸ್ತಕದ ಮೂಟೆಯನ್ನು ಹೊತ್ತು,ದಾರಿಯಲ್ಲಿ ಸಿಗುವ ತೊತಾಪುರಿ ಕೊಡಿಸಿ,ಶ್ಯೂ ಗಲೀಜಾಗತ್ತೆ ಮಣ್ಣಲ್ಲಿ ಉಜ್ಜ ಬೇಡವೋ ಎನ್ನುವ ಅವಳ ತವಕವು ಕಾಣುತ್ತಿಲ್ಲ. ಅವರು ಇಂದು ಬೇಗ
ಬಂದು ಇಷ್ಟದ ಕ್ಯಾಶ್ಯೂ ಬರ್ಫಿ ತಂದು ಇವಳ ಕಾಫಿಗೆ ಕಾದು ಕೂತರು ಅವಳು ಮಾಡುವ ಡಿಕಾಕ್ಷನ್ ಕಂಪು ಮನೆಯಲ್ಲಿ ಕಾಣುತ್ತಿಲ್ಲ!
ಇದು ಸ್ವ`ಗತ'ವಲ್ಲ
ಸಾಕು ನಿಲ್ಲಿಸಿ ಮಹನಿಯರೇ, ಯಾವಾಗಲೂ ನಾನೇ ನಿಮಗೆ ಚರ್ಚೆಯ ವಸ್ತು.
ಸ್ವಲ್ಪ ನನ್ನ ಮಾತು ಕೇಳುವಂತವರಾಗಿ, ಮುಂಜಾನೆ ರಂಗವಲ್ಲಿ ಗಿಂತ ನನಗೆ ನನ್ನ ಸೌಂದರ್ಯವೇ ಮುಖ್ಯ. ಅಯ್ಯೋ ದೀಪ ಬೆಳಗಲು ಮನೆಯಲ್ಲಿ ಎಣ್ಣೆಯಿದೆ,ಸಿ.ಎಫ್.ಎಲ್ ಬಲ್ಬ್‌ಗಳಿವೆ.
ನಾನು ನನ್ನ ಕ್ಲಬ್‌ನ ಸದಸ್ಯರ ಜೊತೆ ಮೀಟಿಂಗ್ ಬಗ್ಗೆ ಮಾತಡೋದಿದೆ. ಅಮ್ಮ ತಾನೇ ಏನೂ ಮಾಡ್ಯಳೂ ಅವಳು ಸ್ಟಾರ್ ಪ್ಲಸ್ ನ `ಸಾಥಿಯಾ' ಸೀರಿಯಲ್‌ನಲ್ಲಿ ಸಿರಿಯಸ್ ಆಗಿ ಬಿಝಿ. `ಹೇ ಅಕ್ಕೋ ಕೊಡವ್ವೋ ನಮಗೆ ಗೀಟಗಿಲ್ಲ ' ಅನ್ನೋ ಮಾತು ಕೆಳ್ತಾ ತರಕಾರಿಗೆ ಜಗಳ ಮಾಡುವುದಕ್ಕಿಂತ ಮಾಲ್‌ಗಳಲ್ಲಿ ಕೊಂಚ ಹೆಚ್ಚೆ ಕೊಟ್ಟು ಫ್ರೆಶ್? ತರಕಾರಿ ತರೋಕೆ ಬಂದಿದ್ದಿನಿ. ಸೀಮೆ ಎಣ್ಣೆ ಕೇಳುವ ಸೀನು ಈಗಿಲ್ಲ ಓವನ್,ಕರೆಂಟ್ ಸ್ಟೌವ್ ಕೊಳ್ಳೊಕೆ ಶೋರೂಮ್‌ಗೆ ಹೊಗೋದಿದೆ. ಅಯ್ಯೋ ಮಲ್ಲಿಗೆಮೊಗ್ಗ ?ಸಮಯವಿಲ್ಲಪ್ಪ ,ಬ್ಯೂಟಿಪಾರ್ಲರ್‌ನಲ್ಲಿ ಲೇಸರ್ ವಿಥ್ ಫೆದರ್ ಕಟ್ ಮಾಡಿಸಿಕ್ಕೊಳಲ್ಲಿಕ್ಕಿದೆ. ಸಾಕಾಗಿದೆ ಅವನ ಬ್ಯಾಗೂ,ಯುನಿಫಾರ್ಮ್ ತೊಳೆದು. ಸೆಕೆಂಡ್ ಶೊ ಸಿನಿಮಾ ಮಜವಾಗಿದೆ. ಅವನನ್ನು ಕರೆ ತರಲೂ ಶಾಲೆಯವರೂ ವಾಹನ ಕೊಟ್ಟಿದ್ದಾರಲ್ಲ ಮತ್ತೆ. ನನ್ನವರಿಗೇನು ವರಿ? ಫ್ರೆಂಡ್ಸ್ ,ಲಾಂಗ್ ಡ್ರೈವ್ ಸಾಕಾಗಿರಬೇಕು ಅದಕ್ಕೆ ಇಂದು ಬೇಗ ಬಂದು ಬರಿ ಬರ್ಫಿಯಲ್ಲೇ ಮುಗಿಸುವವರಿದ್ದಾರೆ.ಅಲ್ಲ ಪೀಜಾ ತಿನ್ನಬೇಕು `ಹಟ್'ಗೆ ಹೋಗೋಣವೆಂದಿದ್ದು
ಮರೆತುಬಿಟ್ಟರೇನೋ ಪಾಪಾ!
ದೀಪದ ಕೆಳಗಿನ ಕತ್ತಲು
ನನ್ನ ಮನದೊಳಗಿನ ಕಿಚ್ಚು ಬಲ್ಲವರಾರು? ಬದಲಾದಳು ಎಂದು ಬೊಬ್ಬೆ ಬಾರಿಸುವ ಜನರೇ ಇಲ್ಲಿ ಕೇಳಿ ನನ್ನ ಬದಲಾವಣೆಗೆ ನೀವೆ ಕಾರಣ. ನನ್ನ ವಿಷಯವ ಹಿಡಿದು ಮೈಕು ಹಿಡಿದು ಚಚ್ಚು ತ್ತಿರಿ. ಪೆನ್ನಿನಿಂದ ಚುಚ್ಚು ತ್ತಿರಿ. ಆದರೆ ಎಂದಾದರು ನನ್ನ ಪ್ರತ್ಯಕ್ಷ ಬಂದು ಕೇಳಿದ್ದಿರಾ ಏನಮ್ಮಾ ನಿನ್ನ ಮನಸಿನ ಮಾತೇನು ಎಂದು? ಜಾಹೀರಾತಿನ ನನ್ನ ಪೋಸು ,ಪಾಶ್ಚರ್‌ಗಳು ನಿಮ್ಮ ಕಣ್ಣು ತಂಪು ಮಾಡುತ್ತವೆ. ಐಟಮ್ ಹಾಡುಗಳ ಹಂಗಾಮ ನಿಮ್ಮ ಹರ್‌ಕತ್‌ಗೆ ಬರೋದೇ ಇಲ್ಲ. ಪಬ್ ಕ್ಲಬ್‌ಗಳಲ್ಲಿ ಗುಂಡು ತುಂಡು ನಡುವೆ ಮೈ ಮೇಲೆ ಪೈಸಾ ಚೆಲ್ಲಿ ನಮ್ಮ ಪವರ್‌ನಲ್ಲಿ ಶಾಖ್ ಹೊಡಿಸಿಕ್ಕೊಳ್ಳುವುದನ್ನು ಮರೆಯುವುದಿಲ್ಲ. ಮೈಮನಗಳ ಸುಳಿಯಲ್ಲಿ ಮನದ್ದನ್ನೆಯಾಗುವ ನಮ್ಮನ್ನು ಸಮಾಜದಿಂದ ಬಹಿಷ್ಕರಿಸುತ್ತಿರಿ. ಅಂತರಂಗದಲ್ಲಿ ಆರಾಧಿಸುತ್ತಿರಿ. ಅಸಹಾಯಕತೆಯ ಸಂದರ್ಭ ಬಳಸಿಕೊಂಡು ಆಕೆಯ ತನ(ನು)ವನ್ನು ಲೂಟಿ ಮಾಡುವ ಲಂಪಟರಿಗೆ ಬೇಲಿ ಹಾಕಲು ನಿಮಗೆ ಸಮಯವಿಲ್ಲ. ಪುಸ್ತಕದಲ್ಲಿ ಹೆಣ್ಣನ್ನು ಅಮಾನವೀಯವಾಗಿ ಚಿತ್ರಿಸಿದ್ದಾರೆಂದು ರಸ್ತೆ ಹಾದಿಯಲ್ಲಿ ಬೋರ್ಡ್‌ಗಳ ಜೊತೆ ಮುಖಪುಟದಲ್ಲಿ ರಾರಾಜಿಸಲೂ ನಿಮಗೆ ಸಮಯದ ಜೊತೆ ಯಾವ ರಾಜಿಯು ಇಲ್ಲ. ನಿಮ್ಮ ಹೊಳಗೊಂದು ಒರಗೊಂದು ನಮಗೂ ಸಾಕಗಿ ಹೋಗಿದೆ. ಅದಕ್ಕೆ ಇಂದು ನಾನು ನಿಮ್ಮ ಹಾಗೇಯೆ ಬದಲಾವಣೆಯ ಹಾದಿ ಹಿಡಿದಿದ್ದೇನೆ. ಸಾಧ್ಯವಾದರೆ ಒಪ್ಪಿಕ್ಕೊಳ್ಳಿ ಇಲ್ಲವೇ ನಿಮ್ಮ ಅದೇ ಹಳೇಯ ಹಿಪೋಕ್ರೈಟ್ ಮುಖವಾಡದಲ್ಲಿ `ಅಯ್ಯೋ ನಮ್ಮ ಹೆಣ್ಣು ಮಕ್ಕಳು ಹಾಳದರೂ' ಎನ್ನುತ್ತಾ ಬೊಬ್ಬೆ ಹೊಡೆಯಿರಿ. ಸರಿ ನಾ ಹೋಗಿ ಬರುವೆ ಅಲ್ಯಾರೋ ಬುದ್ದಿ ಜೀವಿಗಳಂತೆ ನಮಗೆ ಸ್ವಾತಂತ್ರ ಕೊಡಿಸುತ್ತಾರಂತೆ ಅದಕ್ಕೆ ಪುಸ್ತಕ ಬೇರೆ ಬರೆದಿರುವರಂತೆ. ಎಲ್ಲಿ ಜಾಗ ಬಿಡಿ ನೋಡೋಣ ಎಷ್ಟಾಗಿದೆ ಅದರ ಮರು ಮುದ್ರಣ,ಪ್ರಶಸ್ತಿಗಳ ಬಹು`ಮಾನ'?

nijakku badalaavane aagabekiruvudu nimma-nammalli aste!!
ReplyDeletebaravanige chennagide... keep it up
ReplyDeletegood write up
ReplyDeleteBKGanesh
ಹ್ಮಂ ಹ್ಮಂ ಹ್ಮಂ ಏನು ಅಂತ ಹೇಳೋದು ನಿಮ್ಮ ಬರವಣೆಗೆ ಬಗ್ಗೆ ಹೇಳೋ ಅಷ್ಟು ದೊಡ್ಡವನು ಅಲ್ಲಾ..! ನಿಜ ಅಂದ್ರೆ ನಿಮ್ಮ ಬರವಣೆಗೆಯಲ್ಲಿ ಎಲ್ಲೋ ಒಂದು ಅಟ್ರಾಕ್ಷನ್ ಇದೇ ಅಂದ್ರೆ ತುಂಬಾ ಲೈಕ್ ಆಗುತ್ತೆ ಓದುತ್ತ ಓದುತ್ತ ಕೊನೆ ಸಿಕ್ಕರೆ ಇಷ್ಟು ಬೇಗ ಮುಗಿತಾ ಅನ್ನೋಷ್ಟು ಹತಾಶೆ ಇದೇ..!
ReplyDeleteಬೇಕಿದೆ ಬದಲಾವಣೆ :-
"ಎಷ್ಟೇ ಆಗಿರಲಿ ಆಗದಿರಲ ಮರು ಮುದ್ರಣ
ಬಂದಿರಲಿ ಬರದೆ ಇರಲಿ ಪ್ರಶಸ್ತಿಗಳ ಬಹು "ಮಾನ"
ಆಗಲೇ ಬೇಕಿದೆ ಬದಲಾವಣೆ"
ನಮಸ್ಕಾರ ಇನ್ನೊಬ್ಬರಿಗಾಗಿ ಯಾಕೆ ಬದುಕ್ತಿರಾ... ಅಂದರೇ.... ನಿಮಗೆ ಸರಿ ಇಲ್ಲಾ ಅನ್ಸಿಡ್ನ ಖಂಡಿತವಾಗ್ ತಿರಸ್ಕರಿಸಿ
ReplyDeleteಪ್ರೆಶ್ನೆ ಮಾಡೋ ಪ್ರಶ್ನೆ ನೆ ಇಲ್ಲಾ
ಬದಲಾವಣೆ ಪದಕ್ಕೆ ನೂರಾರು ಕೋನ ಗಳಿವೆ ಅದನ್ನ ಅರಿಯದ ಎಮ್ಮೆ -ಕೋಣ ಗಳು ಇವೆ .
ಬದಲಾವಣೆ (catalyst} it may be +ve -ve we have to choose right one
convey tht what u wanted changes in ur belongings sure they ll get convince.
ಶಿಲೆಯಲ್ಲಿ ಅರಳಿದ್ದು ಕಲೆ ಅಂದಮೇಲೆ ಶೀಲಾ ಕಿ ಜವಾನಿ ಬಗ್ಗೆ ಕೆರಳೋ ಮಾತೇಕೆ?
ಪ್ರತಿಯೊಂದು ಅವರವರ ಭಾವಕ್ಕೆ ತಕ್ಕಂತೆ
ಹೂವು ದೇವರಿಗೂ ಪ್ರೀತಿ ಮಡದಿಗೂ ಪ್ರೀತಿ ಯಾವ ಹೂವು ಯಾರ ಮುಡಿಗೋ
ತಪ್ಪು ಹೂವಿನದ?
ನಿಮಗೆ ಯಾವ ಬದಲಾವಣೆ ಬೇಕೋ ಆರಿಸಿ ಕೊಲ್ಲಿ(ಕೊಳ್ಳಿ ). ನೀವು ಹೀಗೆ ಬದಲ್ಲಾಗ ಬೇಕು ಅಂದು ಕೊಂಡರೆ ಹಾಗೆ ಆಗಬಹುದು ಆಯ್ಕೆ ನಿಮ್ಮದು.
ಪರರ ದೂರಿದರೆ ಏನು ಆಗದು ಪ್ರಭಾವಕ್ಕೆ ಒಳಗಾಗುವ ಗುಣ ನಿಮ್ಮನ್ನು ಹಾಗೆ ಮಾಡಿಸುತ್ತೆ(ಹೆಚ್ಹಾಗಿ ಹುಡುಗಿಯರಲ್ಲ್ಲಿ) .
ಯಾವ ಗೆಳೆಯನೂ ಗೆಳತಿಯ ಬಗ್ಗೆ ,ಯಾವ ಅಣ್ಣ ತಮ್ಮ ರು ಸಹೋದರಿ ಬಗ್ಗೆ, ಹಾಗು ಯಾವ ಗಂಡನು ಹೆಂಡತಿ ಬಗ್ಗೆ ಬೇರೆಯವರ ಅ ನುಡಿ ಸಹಿಸುವುದಿಲ್ಲ. ನಿಮ್ಮಲ್ಲೇಕೆ ಸಲ್ಲದ ಬದಲಾವಣೆ
ನಿಮ್ಮೊಳಗಿರುವ ಬೆಳಕು ಸಮಯಬಂದಾಗ ಬೆಂಕಿ ಅಂತ ಹೊಗಳುವವರು ನಾವು.
ನಮ್ಮನ್ನು ದೂರುವವರು ನೀವು :)
ಲೀಖನ ಪ್ರಸ್ತುತಿ ಚೆನ್ನಾಗಿದೆ ಮುಂದುವರೆಯಿರಿ god bless you