Saturday, November 7, 2009
ನೆನಪುಗಳ ಸಂಭ್ರಮಕೆ ನಿನ್ನ ನೆನಪೇ ಸಂಭ್ರಮ.....
ಮಿಲೇ ಸುರ್ ಮೆರ ತುಮ್ಹಾರ ಭೀಮಸೇನ್ ಜೋಷಿ ,ಅಮಿತಾಬ್,ಶಬಾನ ಅಜ್ಮಿ , ಎಲ್ಲರನ್ನು ಮುಂಗಾರು ಮಳೆಯಂತೆ ನೆನೆಸುತ್ತೆ. ೧೦ ವರ್ಷಗಳ ಹಿಂದೆ ದೂರದರ್ಶನದಲ್ಲಿ ನೋಡಿದ್ದ ಹೃದಯನ್ತರಳದಲಿ ಅಡಗಿರುವ ನೋವುಗಳು ನುರುಂಟು ನನ್ನ ನಲ್ಲ ಪರಿಸರ ಕಾಳಜಿಯ ಗೀತೆಗಳು, ಬೇಂದ್ರೆಯವರ ಒಂದೇ ಬಾರಿ ನನ್ನ ನೋಡಿ ಯಾ ಆ ಹುಡುಗಿ ಬಿಂದಿಗೆ ಹಿಡಿದು ನದಿ ಬಳಿ ಕನವರಿಸಿದ್ದು , ರೈಲು ಕಥೆಯನು ಹೇಳಿದ ಆ ಕೊರವಂಜಿ, ಕುವೆಂಪುರವರ ಮಲೆಗಳಲಿ ಮದುಮಗಳು ವಿನ ಜಿಗಣೆ ಶಬ್ದ ತಲೆ ಮೇಲೆ ಚೀಲದಿಂದ ಮಾಡಿದ ಹೊದಿಕೆ ಹಾಕಿಕೊಂಡು ಹೋಗುತಿದ್ದ ಮಂದಿ ಆ ಸೌಂದರ್ಯ ಸವಿಯಲು ಮನೆಯ ಎಲ್ಲ ದೀಪವನ್ನು ಆರಿಸಿ ಕತ್ತಲಲಿ ಅದನ್ನ ಮನತುಂಬಿ ನಕ್ಕಿ,ಆಶ್ಚರ್ಯದಿಂದ ನೋಡಿ ಮನದ ಮುಲೆಯೊಳಗೆ ಹೋಗಿ ಬಾಗಿಲು ಮುಚಿಕೊಂಡಿದ್ದು, ಬಡವರ ಬುಧವಾರದ ಚಿತ್ರಹಾರ್ ,ಭಾನುವಾರದ ರಂಗೋಲಿ, ಪ್ರಾಣಿಗಳೊಂದಿಗೆ ಓಡುತ್ತ ಬೆಟ್ಟದಿಂದ ಹಾರುತಿದ್ದ ಮೊಗ್ಲಿ ,ಮಹಾಬಾರತ, ಮಂಗಳವಾರ ಬರುತ್ತಿದ್ದ ಚಂದ್ರಕಾಂತ ಕಾಡುವಿಕೆಗೆ ಇಷ್ಟು ಸಾಕಲ್ಲವೇ? ಎಲ್ಲಿ ಜಾರಿತೋ ಮನಸ್ಸು ನೆನಪಾಗುತಿದೆ ಕತ್ತಲಲಿ ಕುಳಿತು ಒಳಗೆ ಬಿಕ್ಕುತಿಹಳು ಯಾರೋ ಬಾಲೆ ಜಿ.ಎಸ.ಶಿವರುದ್ರಪ್ಪ ನವರ ಆ ಬಾಲೆಯನ್ತಗಿದೆ ನನ್ನ ಇ ಸ್ಥಿತಿ ಅದೇನೋ ಬೇಡವೆಂದರೂ ಮನಸು ಕಳೆದು ಹೋದದ್ದನ್ನೆ ನೆನೆದು ಆ ನೋವಿನಲ್ಲೇ ಏನೋ ಖುಷಿ ಪಡುತ್ತ್ತದೆ, ಈ ನೆನಪುಗಳೇ ಹೀಗ? ಇಲ್ಲ ಇ ಮನಸೇ ಹೀಗ? ಇಲ್ಲ ನಾವೇ ಹೀಗ? ನಮಗೇಕೆ ಬದಲಾವಣೆ ಅಷ್ಟು ಬೇಗ ರುಚಿಸುವುದಿಲ್ಲ ,ಮನಸ್ಸಿಗೆ ಗೊತ್ತು ನೆನಪುಗಳ ಸೌಂದರ್ಯ ಹೆಚ್ಚಾಗುವುದೇ ವಸ್ತು ಹೊಸತನ,ಬದಲಾವಣೆಗೆ ತನ್ನ ಒಡ್ಡಿಕೊಂದಾಗಲೇ ಎಂದು, ಬದಲಾವಣೆಯ ಹೊಸ ಹಾದಿಯೊಂದಿಗೆ ನೆನಪಿನ ಬುತ್ತಿ ತೆಗೆದುಕೊಂಡು ಹೋಗುವುದ ಮರೆತರೆ ಮುಂದಿನ ಪ್ರಯಾಣಕ್ಕೆ ಚೈತನ್ಯ ಇರುವುದಿಲ್ಲ,ಅರ್ಥವೂ ಇರುವುದಿಲ್ಲ.ಹೌದು ಈ ಬದಲಾವಣೆ ಏಕೆ?ಎಂಥಹ ಬದಲಾವಣೆ? ಅಗತ್ಹ್ಯವ?ಅಯ್ಯೋ ದೇವ್ರೇ ಇದೆಲ್ಲೆಲ್ಲೋ ಹೋಗ್ತ್ಹಿದ್ಯಲ್ಲ ಇದೆಲ್ಲ ಬುದ್ದಿ ಜೀವಿಗಳ ಮಂತ್ರ ನಂಗೆ ಗೊತ್ತಿಲ್ಲ ಅದರ ತಂತ್ರ .ಹ ಅಲ್ಲಿದೆ ನನ್ನ ನೆನಪುಗಳು ಹೇ ನಿಲ್ಲಿ ಎಲ್ಲಿ ಹೋಗ್ತ್ಹಿದಿರ ನ ನಿಮ್ಮೊದಿಂಗೆ ಬರುತ್ತಿದೇನೆ.......
Subscribe to:
Post Comments (Atom)
ninna nenapina handarake bhaava meetida reeti chennaagide chaitra...blog lokakke swagata munduvareyali ninna bhaava yaana...
ReplyDeletenice stuff kano.. liked it..
ReplyDeleteನಿಮ್ಮ ಯೋಚನೆಗೆ ಸರಿ ಹೊಂದುವ ಬರಹ ನನ್ನ ಕವನದಲ್ಲಿದೆ ಒಮ್ಮೆ ಎಲ್ಲ post ಗಳನ್ನೂ ಓದಿ.
ReplyDeleteಚೆನ್ನಾಗಿದೆ. ನಿಮ್ಮ ಶೈಲಿ ಇನ್ನೂ ಬರೀರಿ.
ನಾವೆಲ್ಲ ಒದ್ತೇವೆ.
:) ವಿಚಾರ ಅಭಿವ್ಯಕ್ತಿಯಲ್ಲಿ ಕೊಂಚ ಗೊಂದಲ ಇರುವಂತಿದೆ. ಬರೆಯುತ್ತಾ ಬರೆಯುತ್ತಲೇ ಉತ್ತಮಗೊಳ್ಳುವುದು ಅಭಿವ್ಯಕ್ತಿ.
ReplyDeleteಬರೆಯುತ್ತಿರಿ. ಬ್ರೇಕ್ ಇಲ್ಲದೇ..
ಹಾಯ್ ಮೇಡಂ ಎಲ್ಲಿಂದ ಎಲ್ಲಿ ಗೆ ಸಂಭಂದ ಏನ್ ಹೇಳ್ಬೇಕು ಅಂತ ಅರ್ಥ ಮಾಡ್ಕೊಂಡ್ ಅಮೇಲ್ ಹೇಳಿ
ReplyDeleteಕಳೆಧೋಗ್ ಬಿಡ್ತೀರ ಅಷ್ಟೇ ಏನು ಸಾಧ್ಸೋಕಾಗಲ್ಲ ಹಿಂಗೆ ಗಲಿ ಬಿಲಿ ಆದ್ರೆ RJ ನೀವು ಎಷ್ಟು ಚೆಂದ ಸ್ಕ್ರಿಪ್ಟ್ ಮಾಡ್ಬೇಕು ಏನ್ ಕಥೆ ...ಹೋಗ್ಲಿ ಬಿಡಿ .
ಆಮೇಲೆ ಇನ್ನೋದ್ ವಿಷ್ಯ ಮಂಜು ಬ್ಲಾಗಲ್ಲಿ ನಿಮ್ ಕಾಮೆಂಟ್ ನೋಡಿದೆ
"ಬಹಳ ಚೆನ್ನಾಗಿದೆ ನನಗಂತು ಎಲ್ಲೋ ದೂರದಿ ಹೋದ ಅನುಭವ .ನಮ್ಮ ಜೀವನದಲ್ಲಿ ಇಂಥಹ ಗೆಳತಿ ಗೆಳೆಯರು ಬೇಕು. "ಒಂದೇ ಬಾರಿ ನನ್ನ ನೋಡಿ ಮಂದ ನಗಿ ಹಂಗ ಬೀರಿ ಹೋದ ಆ ಹುಡುಗ" , ನಿನ್ನ ಸಮಾಧಾನದಲ್ಲಿ ತನ್ನ ಬದುಕಿನ ಕೆಲ ಕ್ಷಣ ಕಂಡ ಆಕೆಯ ಬದುಕಿನ ಕಂಗಳಲ್ಲಿ , ಬದುಕಿನ ಪ್ರೀತಿ,ಭರವಸೆ,ನಿರಾಸೆ ಗಳಿವೆ, ಆ ಗೆಳತಿ ನಿನಗೆ ಮತ್ತೆ ಸಿಗಬಾರದು ಎಂದು ನನ್ನ ಅಸೆ ಏಕೆಂದರೆ ಹೋದವರು ಕೇವಲ ನೆನಪಾಗಿ ಅಷ್ಟೇ ಉಳಿಯಬೇಕು ,ಮತ್ತೆ ಕಾಣಬಾರದು ಅಲ್ಲಿ ಬದುಕಿನ ಅಸಂಗತ ಕ್ಷಣಗಳು ಭಾವನೆಯ ಸಿಂಹಾಸನದ ಮೇಲೆ ನೆನಪಿನ ಮಣಿ ಮಾಲೆಯಲ್ಲಿ ರಾ ರಾ ಜಿಸುವುದೇ ಅನುಪಮ ಆನಂದ.ದಿಗಂತ ದಚೆ ಕಾಣುವ ಚುಕ್ಕಿ ಚಂದ್ರನ ಬಿಂಬದಂತೆ ," ಯಾವ ರಾಗಕೋ ಏನೋ ನನ್ನೆದೆ ವೀಣೆ ಮಿಡಿಯುತ ನರಳಿದೆ" "
ಬದಲಾವಣೆ ನ ಸ್ವೀಕರಿಸೋ ಪಾಸಿಟಿವ್ ಥಿಂಕಿಂಗ್ ಬೇಕು ಜೀವನದಲ್ಲಿ ಯಾರನ್ನು ಕಳ್ಕೋ ಬಾರದು ಮತ್ತೆ ಸಿಗೋ ಆಶಾ ವಾದ ಹೊಸ ಚೈತನ್ಯ ಕೊಡುತ್ತೆ ಬದುಕಿನಲ್ಲಿ ಜೀವ ತುಬುತ್ತೆ ಇಲ್ಲಾಂದ್ರೆ ಸತ್ತಂತೆ ಬದುಕೋ ಈ ಕಾಲದ ಯಂತ್ರ ಮಾನವರ ಥರ ಆಗ್ಬಿಡ್ತಿವಿ.
non of ur business ಅನ್ಬೇಡಿ ಬ್ಲಾಗ್ ಹೇಗಿದೆ ಅಂತ ಕಣ್ಣಾಡಿಸಿದ ತಪ್ಪಿಗೆ ಏನೋ ಗೀಚ್ ಬೇಕು ಅನ್ಸ್ತು ಇದರಿಂದ ಉಪಯೋಗ ಆದ್ರೆ ಸರಿ ಇಲ್ಲಾಂದ್ರೆ ನಿಮ್ ಕೀ ಬೋರ್ಡ್ ನಲ್ಲಿ ಡಿಲೀಟ್ ಕೀ ಇದೇ ಅಲ್ವಾ ಸ್ವಲ್ಪ ಕೆಲಸ ಕೊಡಿ ಅಷ್ಟೇ ....
have nice time ahead morning jasmine....
ನೆನಪುಗಳ ಹಿಂದೇ ಓಡೋ ಕುದುರೆಗಳ ನಾವೆಲ್ಲ ಅಲ್ವ !
ReplyDeleteಚಿಕ್ಕದಾದರು ತುಂಬಾ ಚನ್ನಾಗಿ ಬರೆದಿದ್ದಿರ ಮೊದ ಮೊದಲ ಪ್ರಯತ್ನ !
ತುಂಬಾ ಇಷ್ಟ ವಾಯಿತು ಕಾರಣ ನನ್ನ ಬಾಲ್ಯದ ಕೆಲವು ನೆನಪುಗಳು ಈಗ ನಿಮ್ಮ "ನೆನಪುಗಳ ಸಂಭ್ರಮಕೆ ನಿನ್ನ ನೆನಪೇ ಸಂಭ್ರಮ.. "ಓದಿದಾಗ ಕಣ್ಣು ಮುಂದೆ ಚಿತ್ರ ಬಿಡಿಸಿದಂತೆ ಆಯ್ತು ನೆನಪುಗಳು ಹೀಗೆ ಯಾರನ್ನು ಬಿಡೋಲ್ಲ !
ಅದಕ್ಕೆ ನಾನು ಅನ್ಕೊಳ್ತಿನಿ ಈ ನೆನಪುಗಳನ್ನ ಕಟ್ಟಿ ಹಾಕಿ ಗೋಡೆಯ ಮೇಲೆ ಫೋಟೋ ಥರ ನೇತು ಹಾಕಿ ಬಿಟ್ಟಿದ್ದಾರೆ ಹೇಗಿರುತ್ತಿತ್ತು ??? ಬೇಡವೆಂದಾಗ ಕಿತ್ತು ಬಿಸಾಕ ಬಹುದಿತ್ತು ಅಲ್ವ ! ಆಗದ ಕೆಲಸ ಬರಿ ಕಲ್ಪನೆ ಅಷ್ಟೇ !
ಚಿಕ್ಕದಾದ ಚೊಕ್ಕದಾದ ಬರಹ
ReplyDeleteಒಳ್ಳೆಯ ಶೈಲಿ ನಿಮ್ಮದು
ಬರೆಯುತ್ತಿರಿ
chennaagide.
ReplyDeleteನಿಮ್ಮ ಲೇಖನ ಕುತೂಹಲಕರವಾಗಿದೆ. ಯಾಕೆ ಮುಂದೆ ಬರೆಯುತ್ತಿಲ್ಲ
ReplyDeleteಯಾವ ರಾಗಕೋ ಏನೋ ನನ್ನೆದೆ ವೀಣೆ ಮಿಡಿಯುತ ನರಳಿದೆ ಈ ಹಾಡು ಬರೆದವರು ಯಾರು? ಹಾಡಿದವರು ಯಾರು? ಯಾವ cd ಯಲ್ಲಿದೆ? ತಿಳಿಸಿ. ನನ್ನ ಮೇಲ್ ID aravindavidya@gmail.com
ReplyDelete