Sunday, February 17, 2013

UNIQ WOR(L)D

ನನಗೆ ಟೈಮ್ ಇಲ್ಲ
ಆದ್ರೂ ಫೋನ್ ಬಿಲ್ 2000 ದಾಟುತ್ತೆ
ನನಗೆ ಟೈಮ್ ಇಲ್ಲ
ಆದ್ರೂ ಫೇಸ್ ಬುಕ್ ನಲಿ ನನ್ನದೇ ಹತ್ತಾರು ಶೇರ್ ಇರುತ್ತೆ
ನನಗೆ ಟೈಮ್ ಇಲ್ಲ
ಆದ್ರೂ ಹೂಸ ಸಿಮ್ ಮಾರುಕಟ್ಟೆಗೆ ಬರುತ್ತಲೇ ಇದೆ
ನನಗೆ ಟೈಮ್ ಇಲ್ಲ
ಆದ್ರೂ ಜಿ ಮೇಲ್ ಚಾಟ್ ಲಿಸ್ಟ್ ದೊಡ್ದದಾಗ್ತಿದೆ
ನನಗೆ ಟೈಮ್ ಇಲ್ಲ
ಆದ್ರೂ ಮಾರುಕಟ್ಟೆಗೆ ಎಸ್ ಎಂ ಎಸ್ ಹೊಸ ಆಫರ್ಸ್ ಬರ್ತಲೇ ಇದೆ
ನನಗೆ ಟೈಮ್ ಇಲ್ಲ
ಆದ್ರೂ ಅರ್ಧ ಪೈಸೆ ಸಿಮ್ ಕಾಲ್ ರೇಟ್ ಸಿಮ್ ನನ್ನ ಬಳಿ ಇದೆ
ನನಗೆ ಟೈಮ್ ಇಲ್ಲ
ಆದ್ರೂ 2 ಮೊಬೈಲ್ , ಡುಯೆಲ್ ಸಿಮ್ ನನ್ನ ಬಳಿ ಇದೆ
ನನಗೆ ಟೈಮ್ ಇಲ್ಲ
ಆದ್ರೂ ಫ್ರೆಂಡ್ ಜೊತೆಗಿನ ಜಾಲಿ ರೈಡ್ ಫೋಟೋ ಅಪ್ ಲೋಡ್ ಆಗ್ತಿದೆ
ನನಗೆ ಟೈಮ್ ಇಲ್ಲ
ಆದ್ರೂ ಒಬೆಸಿಟಿ ಜಾಸ್ತಿ ಆಗ್ತಿದೆ
ನನಗೆ ಟೈಮ್ ಇಲ್ಲ
ಆದ್ರೂ ಹೊಸ ಜಿಮ್ ಗಳು ಹುಟ್ಟುತಿವೆ
ನನಗೆ ಟೈಮ್ ಇಲ್ಲ
ಆದ್ರೂ ಮಾರುಕಟ್ಟೆಗೆ ಹೊಸ ಫ್ಯಾಷನ್ ಇಣುಕುತ್ತಿದೆ
ನನಗೆ ಟೈಮ್ ಇಲ್ಲ
ಆದ್ರೂ ಮೊಬೈಲ್ ನಲ್ಲಿ ನೇಮ್ಸ್ ಮೆಮೊರಿ ಫುಲ್ ಆಗ್ತಿದೆ
ನನಗೆ ಟೈಮ್ ಇಲ್ಲ
ಆದ್ರೂ ಪದ್ಯ ಪೋಸ್ಟ್ ಆಗ್ತಿದೆ
ನನಗೆ ಟೈಮ್ ಇಲ್ಲ
ಆದ್ರೂ ಲೈಕ್ ಬೀಳ್ತಾ ಇದೆ -UNIQ WOR(L)D

Friday, March 18, 2011

ಬದಲಾವಣೆ ಹೊಸ್ತಿಲಲ್ಲಿ ಅವಳ ಬಲಗಾಲು...

ಮುಂಜಾವು ನೇಸರನ ಸ್ವಾಗತಿಸಲು ಅಂಗಳದಲ್ಲಿ ರಂಗವಲ್ಲಿ ರಂಗಿಲ್ಲ. ದೀಪ ಬೆಳಗುವ ಹೊತ್ತಲ್ಲಿ ಮನೆಯೊಳಗೆ ಮನೆಯೊಡತಿ ಇಲ್ಲ. ದೀಪ ಹಚ್ಚುವ ಸಮಯ ಎಲ್ಲಿಗೆ ಹೊರಟೆ ನೀನು? ಕೇಳಲೂ ಅಮ್ಮನಿಗೂ ಮನಸಿಲ್ಲ. ದಾರಿಯ ತರಕಾರಿ ಕಾಳಯ್ಯನ ಜೊತೆ ಎರಡು ಟೊಮ್ಯಾಟೊ ಹೆಚ್ಚಿಗೆ ಕೇಳಲು ಅವಳಿಲ್ಲ. ಮನೆಯಲ್ಲಿ ಸಿಲಿಂಡರ್‌ ಮುಗಿದಿದೆ ಪಕ್ಕದ ಮನೆಗೆ ಹೋಗಿ ಸ್ವಲ್ಪ ಸೀಮೆಎಣ್ಣೆ ಕೇಳುವ ನೆರೆಹೊರೆಯ ಒಡನಾಟದಲ್ಲೂ ಅವಳ ಸದ್ದಿಲ್ಲ. ನಾಳೆ ಸ್ನಾನಕೆ ಶೀಗೆ ಚುಚ್ಚಲು ಪುಡಿ ಸಿದ್ದಗೊಳಿಸುವ ಘಾಟು ಯಾಕೋ ಘಮಿಸುತ್ತಿಲ್ಲ. ಕಾಯಿಮೊಟ್ಟೆ ಬಂತು ಹಾಕಿಸಿಕ್ಕೊಳ್ಳುತ್ತಿರಮ್ಮಾ? ಹೊರಗವನೂ ಕೂಗುತ್ತಿದ್ದಾನೆ. ಇವಳು ಅವನಿಗೆ ಕಾಯಲೂ ಹೇಳಿಲ್ಲ. ಸಪ್ತಪದಿಯ ಹೊಸ್ತಿಲಲ್ಲಿ ನಿಂತ ಎದುರು ಮನೆಯ ನೀರೆಯ ಮೊಗ್ಗಿನ ಜಡೆ ಬೇಕು ನಾನು ಫೋಟೋ ತೆಗೆಸಿಕ್ಕೊಳ್ಳಬೇಕು ಎನ್ನುತ್ತಿದ್ದವಳು ಮೊಗ್ಗು ಮುದುಡುವ ಸಮಯವಾದರೂ ಬರುವ ಸೂಚನೆ ಕಾಣುತ್ತಿಲ್ಲ. ಗಂಟೆ ನಾಲ್ಕಾಯಿತು ಶಾಲೆಯಿಂದ ಅವನ ಪುಸ್ತಕದ ಮೂಟೆಯನ್ನು ಹೊತ್ತು,ದಾರಿಯಲ್ಲಿ ಸಿಗುವ ತೊತಾಪುರಿ ಕೊಡಿಸಿ,ಶ್ಯೂ ಗಲೀಜಾಗತ್ತೆ ಮಣ್ಣಲ್ಲಿ ಉಜ್ಜ ಬೇಡವೋ ಎನ್ನುವ ಅವಳ ತವಕವು ಕಾಣುತ್ತಿಲ್ಲ. ಅವರು ಇಂದು ಬೇಗ
ಬಂದು ಇಷ್ಟದ ಕ್ಯಾಶ್ಯೂ ಬರ್ಫಿ ತಂದು ಇವಳ ಕಾಫಿಗೆ ಕಾದು ಕೂತರು ಅವಳು ಮಾಡುವ ಡಿಕಾಕ್ಷನ್‌ ಕಂಪು ಮನೆಯಲ್ಲಿ ಕಾಣುತ್ತಿಲ್ಲ!
ಇದು ಸ್ವ`ಗತ'ವಲ್ಲ
ಸಾಕು ನಿಲ್ಲಿಸಿ ಮಹನಿಯರೇ, ಯಾವಾಗಲೂ ನಾನೇ ನಿಮಗೆ ಚರ್ಚೆಯ ವಸ್ತು.
ಸ್ವಲ್ಪ ನನ್ನ ಮಾತು ಕೇಳುವಂತವರಾಗಿ, ಮುಂಜಾನೆ ರಂಗವಲ್ಲಿ ಗಿಂತ ನನಗೆ ನನ್ನ ಸೌಂದರ್ಯವೇ ಮುಖ್ಯ. ಅಯ್ಯೋ ದೀಪ ಬೆಳಗಲು ಮನೆಯಲ್ಲಿ ಎಣ್ಣೆಯಿದೆ,ಸಿ.ಎಫ್‌.ಎಲ್‌ ಬಲ್ಬ್‌ಗಳಿವೆ.
ನಾನು ನನ್ನ ಕ್ಲಬ್‌ನ ಸದಸ್ಯರ ಜೊತೆ ಮೀಟಿಂಗ್‌ ಬಗ್ಗೆ ಮಾತಡೋದಿದೆ. ಅಮ್ಮ ತಾನೇ ಏನೂ ಮಾಡ್ಯಳೂ ಅವಳು ಸ್ಟಾರ್‌ ಪ್ಲಸ್‌ ನ `ಸಾಥಿಯಾ' ಸೀರಿಯಲ್‌ನಲ್ಲಿ ಸಿರಿಯಸ್‌ ಆಗಿ ಬಿಝಿ. `ಹೇ ಅಕ್ಕೋ ಕೊಡವ್ವೋ ನಮಗೆ ಗೀಟಗಿಲ್ಲ ' ಅನ್ನೋ ಮಾತು ಕೆಳ್ತಾ ತರಕಾರಿಗೆ ಜಗಳ ಮಾಡುವುದಕ್ಕಿಂತ ಮಾಲ್‌ಗಳಲ್ಲಿ ಕೊಂಚ ಹೆಚ್ಚೆ ಕೊಟ್ಟು ಫ್ರೆಶ್‌? ತರಕಾರಿ ತರೋಕೆ ಬಂದಿದ್ದಿನಿ. ಸೀಮೆ ಎಣ್ಣೆ ಕೇಳುವ ಸೀನು ಈಗಿಲ್ಲ ಓವನ್‌,ಕರೆಂಟ್‌ ಸ್ಟೌವ್‌ ಕೊಳ್ಳೊಕೆ ಶೋರೂಮ್‌ಗೆ ಹೊಗೋದಿದೆ. ಅಯ್ಯೋ ಮಲ್ಲಿಗೆಮೊಗ್ಗ ?ಸಮಯವಿಲ್ಲಪ್ಪ ,ಬ್ಯೂಟಿಪಾರ್ಲರ್‌ನಲ್ಲಿ ಲೇಸರ್‌ ವಿಥ್‌ ಫೆದರ್‌ ಕಟ್‌ ಮಾಡಿಸಿಕ್ಕೊಳಲ್ಲಿಕ್ಕಿದೆ. ಸಾಕಾಗಿದೆ ಅವನ ಬ್ಯಾಗೂ,ಯುನಿಫಾರ್ಮ್‌ ತೊಳೆದು. ಸೆಕೆಂಡ್‌ ಶೊ ಸಿನಿಮಾ ಮಜವಾಗಿದೆ. ಅವನನ್ನು ಕರೆ ತರಲೂ ಶಾಲೆಯವರೂ ವಾಹನ ಕೊಟ್ಟಿದ್ದಾರಲ್ಲ ಮತ್ತೆ. ನನ್ನವರಿಗೇನು ವರಿ? ಫ್ರೆಂಡ್ಸ್‌ ,ಲಾಂಗ್‌ ಡ್ರೈವ್‌ ಸಾಕಾಗಿರಬೇಕು ಅದಕ್ಕೆ ಇಂದು ಬೇಗ ಬಂದು ಬರಿ ಬರ್ಫಿಯಲ್ಲೇ ಮುಗಿಸುವವರಿದ್ದಾರೆ.ಅಲ್ಲ ಪೀಜಾ ತಿನ್ನಬೇಕು `ಹಟ್‌'ಗೆ ಹೋಗೋಣವೆಂದಿದ್ದು
ಮರೆತುಬಿಟ್ಟರೇನೋ ಪಾಪಾ!
ದೀಪದ ಕೆಳಗಿನ ಕತ್ತಲು
ನನ್ನ ಮನದೊಳಗಿನ ಕಿಚ್ಚು ಬಲ್ಲವರಾರು? ಬದಲಾದಳು ಎಂದು ಬೊಬ್ಬೆ ಬಾರಿಸುವ ಜನರೇ ಇಲ್ಲಿ ಕೇಳಿ ನನ್ನ ಬದಲಾವಣೆಗೆ ನೀವೆ ಕಾರಣ. ನನ್ನ ವಿಷಯವ ಹಿಡಿದು ಮೈಕು ಹಿಡಿದು ಚಚ್ಚು ತ್ತಿರಿ. ಪೆನ್ನಿನಿಂದ ಚುಚ್ಚು ತ್ತಿರಿ. ಆದರೆ ಎಂದಾದರು ನನ್ನ ಪ್ರತ್ಯಕ್ಷ ಬಂದು ಕೇಳಿದ್ದಿರಾ ಏನಮ್ಮಾ ನಿನ್ನ ಮನಸಿನ ಮಾತೇನು ಎಂದು? ಜಾಹೀರಾತಿನ ನನ್ನ ಪೋಸು ,ಪಾಶ್ಚರ್‌ಗಳು ನಿಮ್ಮ ಕಣ್ಣು ತಂಪು ಮಾಡುತ್ತವೆ. ಐಟಮ್‌ ಹಾಡುಗಳ ಹಂಗಾಮ ನಿಮ್ಮ ಹರ್‌ಕತ್‌ಗೆ ಬರೋದೇ ಇಲ್ಲ. ಪಬ್‌ ಕ್ಲಬ್‌ಗಳಲ್ಲಿ ಗುಂಡು ತುಂಡು ನಡುವೆ ಮೈ ಮೇಲೆ ಪೈಸಾ ಚೆಲ್ಲಿ ನಮ್ಮ ಪವರ್‌ನಲ್ಲಿ ಶಾಖ್‌ ಹೊಡಿಸಿಕ್ಕೊಳ್ಳುವುದನ್ನು ಮರೆಯುವುದಿಲ್ಲ. ಮೈಮನಗಳ ಸುಳಿಯಲ್ಲಿ ಮನದ್ದನ್ನೆಯಾಗುವ ನಮ್ಮನ್ನು ಸಮಾಜದಿಂದ ಬಹಿಷ್ಕರಿಸುತ್ತಿರಿ. ಅಂತರಂಗದಲ್ಲಿ ಆರಾಧಿಸುತ್ತಿರಿ. ಅಸಹಾಯಕತೆಯ ಸಂದರ್ಭ ಬಳಸಿಕೊಂಡು ಆಕೆಯ ತನ(ನು)ವನ್ನು ಲೂಟಿ ಮಾಡುವ ಲಂಪಟರಿಗೆ ಬೇಲಿ ಹಾಕಲು ನಿಮಗೆ ಸಮಯವಿಲ್ಲ. ಪುಸ್ತಕದಲ್ಲಿ ಹೆಣ್ಣನ್ನು ಅಮಾನವೀಯವಾಗಿ ಚಿತ್ರಿಸಿದ್ದಾರೆಂದು ರಸ್ತೆ ಹಾದಿಯಲ್ಲಿ ಬೋರ್ಡ್‌ಗಳ ಜೊತೆ ಮುಖಪುಟದಲ್ಲಿ ರಾರಾಜಿಸಲೂ ನಿಮಗೆ ಸಮಯದ ಜೊತೆ ಯಾವ ರಾಜಿಯು ಇಲ್ಲ. ನಿಮ್ಮ ಹೊಳಗೊಂದು ಒರಗೊಂದು ನಮಗೂ ಸಾಕಗಿ ಹೋಗಿದೆ. ಅದಕ್ಕೆ ಇಂದು ನಾನು ನಿಮ್ಮ ಹಾಗೇಯೆ ಬದಲಾವಣೆಯ ಹಾದಿ ಹಿಡಿದಿದ್ದೇನೆ. ಸಾಧ್ಯವಾದರೆ ಒಪ್ಪಿಕ್ಕೊಳ್ಳಿ ಇಲ್ಲವೇ ನಿಮ್ಮ ಅದೇ ಹಳೇಯ ಹಿಪೋಕ್ರೈಟ್‌ ಮುಖವಾಡದಲ್ಲಿ `ಅಯ್ಯೋ ನಮ್ಮ ಹೆಣ್ಣು ಮಕ್ಕಳು ಹಾಳದರೂ' ಎನ್ನುತ್ತಾ ಬೊಬ್ಬೆ ಹೊಡೆಯಿರಿ. ಸರಿ ನಾ ಹೋಗಿ ಬರುವೆ ಅಲ್ಯಾರೋ ಬುದ್ದಿ ಜೀವಿಗಳಂತೆ ನಮಗೆ ಸ್ವಾತಂತ್ರ ಕೊಡಿಸುತ್ತಾರಂತೆ ಅದಕ್ಕೆ ಪುಸ್ತಕ ಬೇರೆ ಬರೆದಿರುವರಂತೆ. ಎಲ್ಲಿ ಜಾಗ ಬಿಡಿ ನೋಡೋಣ ಎಷ್ಟಾಗಿದೆ ಅದರ ಮರು ಮುದ್ರಣ,ಪ್ರಶಸ್ತಿಗಳ ಬಹು`ಮಾನ'?

Saturday, November 7, 2009

ನೆನಪುಗಳ ಸಂಭ್ರಮಕೆ ನಿನ್ನ ನೆನಪೇ ಸಂಭ್ರಮ.....

ಮಿಲೇ ಸುರ್ ಮೆರ ತುಮ್ಹಾರ ಭೀಮಸೇನ್ ಜೋಷಿ ,ಅಮಿತಾಬ್,ಶಬಾನ ಅಜ್ಮಿ , ಎಲ್ಲರನ್ನು ಮುಂಗಾರು ಮಳೆಯಂತೆ ನೆನೆಸುತ್ತೆ. ೧೦ ವರ್ಷಗಳ ಹಿಂದೆ ದೂರದರ್ಶನದಲ್ಲಿ ನೋಡಿದ್ದ ಹೃದಯನ್ತರಳದಲಿ ಅಡಗಿರುವ ನೋವುಗಳು ನುರುಂಟು ನನ್ನ ನಲ್ಲ ಪರಿಸರ ಕಾಳಜಿಯ ಗೀತೆಗಳು, ಬೇಂದ್ರೆಯವರ ಒಂದೇ ಬಾರಿ ನನ್ನ ನೋಡಿ ಯಾ ಆ ಹುಡುಗಿ ಬಿಂದಿಗೆ ಹಿಡಿದು ನದಿ ಬಳಿ ಕನವರಿಸಿದ್ದು , ರೈಲು ಕಥೆಯನು ಹೇಳಿದ ಆ ಕೊರವಂಜಿ, ಕುವೆಂಪುರವರ ಮಲೆಗಳಲಿ ಮದುಮಗಳು ವಿನ ಜಿಗಣೆ ಶಬ್ದ ತಲೆ ಮೇಲೆ ಚೀಲದಿಂದ ಮಾಡಿದ ಹೊದಿಕೆ ಹಾಕಿಕೊಂಡು ಹೋಗುತಿದ್ದ ಮಂದಿ ಆ ಸೌಂದರ್ಯ ಸವಿಯಲು ಮನೆಯ ಎಲ್ಲ ದೀಪವನ್ನು ಆರಿಸಿ ಕತ್ತಲಲಿ ಅದನ್ನ ಮನತುಂಬಿ ನಕ್ಕಿ,ಆಶ್ಚರ್ಯದಿಂದ ನೋಡಿ ಮನದ ಮುಲೆಯೊಳಗೆ ಹೋಗಿ ಬಾಗಿಲು ಮುಚಿಕೊಂಡಿದ್ದು, ಬಡವರ ಬುಧವಾರದ ಚಿತ್ರಹಾರ್ ,ಭಾನುವಾರದ ರಂಗೋಲಿ, ಪ್ರಾಣಿಗಳೊಂದಿಗೆ ಓಡುತ್ತ ಬೆಟ್ಟದಿಂದ ಹಾರುತಿದ್ದ ಮೊಗ್ಲಿ ,ಮಹಾಬಾರತ, ಮಂಗಳವಾರ ಬರುತ್ತಿದ್ದ ಚಂದ್ರಕಾಂತ ಕಾಡುವಿಕೆಗೆ ಇಷ್ಟು ಸಾಕಲ್ಲವೇ? ಎಲ್ಲಿ ಜಾರಿತೋ ಮನಸ್ಸು ನೆನಪಾಗುತಿದೆ ಕತ್ತಲಲಿ ಕುಳಿತು ಒಳಗೆ ಬಿಕ್ಕುತಿಹಳು ಯಾರೋ ಬಾಲೆ ಜಿ.ಎಸ.ಶಿವರುದ್ರಪ್ಪ ನವರ ಆ ಬಾಲೆಯನ್ತಗಿದೆ ನನ್ನ ಇ ಸ್ಥಿತಿ ಅದೇನೋ ಬೇಡವೆಂದರೂ ಮನಸು ಕಳೆದು ಹೋದದ್ದನ್ನೆ ನೆನೆದು ಆ ನೋವಿನಲ್ಲೇ ಏನೋ ಖುಷಿ ಪಡುತ್ತ್ತದೆ, ಈ ನೆನಪುಗಳೇ ಹೀಗ? ಇಲ್ಲ ಇ ಮನಸೇ ಹೀಗ? ಇಲ್ಲ ನಾವೇ ಹೀಗ? ನಮಗೇಕೆ ಬದಲಾವಣೆ ಅಷ್ಟು ಬೇಗ ರುಚಿಸುವುದಿಲ್ಲ ,ಮನಸ್ಸಿಗೆ ಗೊತ್ತು ನೆನಪುಗಳ ಸೌಂದರ್ಯ ಹೆಚ್ಚಾಗುವುದೇ ವಸ್ತು ಹೊಸತನ,ಬದಲಾವಣೆಗೆ ತನ್ನ ಒಡ್ಡಿಕೊಂದಾಗಲೇ ಎಂದು, ಬದಲಾವಣೆಯ ಹೊಸ ಹಾದಿಯೊಂದಿಗೆ ನೆನಪಿನ ಬುತ್ತಿ ತೆಗೆದುಕೊಂಡು ಹೋಗುವುದ ಮರೆತರೆ ಮುಂದಿನ ಪ್ರಯಾಣಕ್ಕೆ ಚೈತನ್ಯ ಇರುವುದಿಲ್ಲ,ಅರ್ಥವೂ ಇರುವುದಿಲ್ಲ.ಹೌದು ಈ ಬದಲಾವಣೆ ಏಕೆ?ಎಂಥಹ ಬದಲಾವಣೆ? ಅಗತ್ಹ್ಯವ?ಅಯ್ಯೋ ದೇವ್ರೇ ಇದೆಲ್ಲೆಲ್ಲೋ ಹೋಗ್ತ್ಹಿದ್ಯಲ್ಲ ಇದೆಲ್ಲ ಬುದ್ದಿ ಜೀವಿಗಳ ಮಂತ್ರ ನಂಗೆ ಗೊತ್ತಿಲ್ಲ ಅದರ ತಂತ್ರ .ಹ ಅಲ್ಲಿದೆ ನನ್ನ ನೆನಪುಗಳು ಹೇ ನಿಲ್ಲಿ ಎಲ್ಲಿ ಹೋಗ್ತ್ಹಿದಿರ ನ ನಿಮ್ಮೊದಿಂಗೆ ಬರುತ್ತಿದೇನೆ.......